ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್

(ಕರ್ನಾಟಕ ಸರ್ಕಾರದ ಅಧೀನ ಸಂಸ್ಥೆ)

Back
ಪಾನೀಯ

ಸರ್ಕಾರವು ಕಾಲಕಾಲಕ್ಕೆ ವಹಿಸಿಕೊಟ್ಟಂತಹ ವಿವಿಧ ಕಾರ್ಯಯೋಜನೆಗಳನ್ನು ನಿರ್ವಹಿಸುವಲ್ಲಿ ಎಂಎಸ್‍ಐಎಲ್ ದೋಷರಹಿತ ದಾಖಲೆಯನ್ನು ಹೊಂದಿದೆ. ಕರ್ನಾಟಕ ಸರ್ಕಾರ ವಹಿಸಿಕೊಟ್ಟಂತಹ ಇತ್ತೀಚಿನ ಜವಾಬ್ದಾರಿ ‘ಚಿಲ್ಲರೆ ಮದ್ಯ’ ವ್ಯವಹಾರ. ಕರ್ನಾಟಕ ರಾಜ್ಯದಲ್ಲಿ ಸಾರಾಯಿ ಮಾರಾಟವನ್ನು ನಿಷೇಧಿಸಿದ ಪರಿಣಾಮವಾಗಿ, ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಅಕ್ರಮ ಮದ್ಯ ಮಾರಾಟದ ನಿದರ್ಶನಗಳು ಜನರ ಜೀವಕ್ಕೆ ಅಪಾಯವನ್ನುಂಟುಮಾಡಿದೆ. ಅಲ್ಲದೆ, ಮದ್ಯದ ಲಭ್ಯತೆಯು ಹೆಚ್ಚಾಗಿ ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ಸೀಮಿತವಾಗಿರುವುದರಿಂದ, ಹೆಚ್ಚಿನ ದರದಲ್ಲಿ ಅಕ್ರಮವಾಗಿ ಮದ್ಯ ಮಾರಾಟದ ಉದಾಹರಣೆಗಳು ಕೂಡ ಇವೆ.

ಈ ಹಿನ್ನೆಲೆಯಲ್ಲಿ, ಎಂಆರ್‍ಪಿ ಉಲ್ಲಂಘನೆಯನ್ನು ನಿಗ್ರಹಿಸುವ ಸಲುವಾಗಿ, ಬೇಡಿಕೆಗೆ ಅನುಗುಣವಾಗಿ ಕರ್ನಾಟಕ ಸರ್ಕಾರ 2009ರಲ್ಲಿ 463 ಚಿಲ್ಲರೆ ಮದ್ಯದಂಗಡಿಗಳನ್ನು ಎಂಎಸ್‍ಐಎಲ್‍ಗೆ ಮಂಜೂರು ಮಾಡಿರುತ್ತದೆ. ಇದರ ಯಶಸ್ಸನ್ನು ಮನಗಂಡು 2016ರಲ್ಲಿ ಹೆಚ್ಚುವರಿಯಾಗಿ 900 ಮಳಿಗೆಗಳನ್ನು ಕರ್ನಾಟಕ ಸರ್ಕಾರವು ಮಂಜೂರುಮಾಡಿರುತ್ತದೆ. ಗುಣಮಟ್ಟದ ಮದ್ಯವನ್ನು ಎಂಆರ್‍ಪಿಯಲ್ಲಿ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡುವ ಉದ್ದೇಶ ಸಂಸ್ಥೆಯದು.

ಈ ಪರಿಕಲ್ಪನೆಯು ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಎಂಎಸ್‍ಐಎಲ್ ಅತ್ಯಂತ ಕಡಿಮೆ ಅವಧಿಯಲ್ಲಿ ರಾಜ್ಯದ ಪ್ರತಿಯೊಂದು ಮೂಲೆ ಮೂಲೆಯಲ್ಲೂ ಚಿಲ್ಲರೆ ಮದ್ಯದಂಗಡಿಗಳನ್ನು ಯಶಸ್ವಿಯಾಗಿ ಸ್ಥಾಪಿಸಿದೆ.ಅಕ್ಟೋಬರ್ 2023 ರ ವರೆಗೆ ಎಂಎಸ್‍ಐಎಲ್‍ನ ಒಟ್ಟು 1029 ಮದ್ಯದಂಗಡಿಗಳು ರಾಜ್ಯಾದ್ಯಂತ ಕಾರ್ಯನಿರ್ವಹಿಸುತ್ತಿವೆ. ಎಂಎಸ್‍ಐಎಲ್ ಸಂಸ್ಥೆಯು ಮದ್ಯ ಮಳಿಗೆಗಳಲ್ಲಿ ಎಂಆರ್‍ಪಿ ಪರಿಕಲ್ಪನೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

 

             

                                                                     

×
ABOUT DULT ORGANISATIONAL STRUCTURE PROJECTS